Friday, October 4, 2013

ಮರುದನಿ

ನೀನು
ಕಿನ್ನರಿ, ದೇವತೆ, ಮತ್ತು ಪುಟ್ ರಾಕ್ಷಸಿ
ಅಂದ್ಕೊಂಡಿದ್ದೆ.
ಅದೆಲ್ಲ ಹೌದು.
ಜೊತೆಗೇ....
...ಒಳಗಿನದನ್ನು
ಇಣುಕಿ ನೋಡಲು
ನನ್ನೆಲ್ಲ ಹೆಜ್ಜೆಗಳ
ಸವೆದ ದಾರಿಗಳ
ತಿರುವುಗಳ
ಪಾಯಿಂಟ್ ಆಫ್ ನೋ ರಿಟರ್ನುಗಳ
ಹಾಯ್ದ ಕೆಂಡದ ಕುಳಿಗಳ
ಕೆಲಿಡೋಸ್ಕೋಪಿಕ್ ಕನ್ನಡಿ
ನೀನೆಂಬ ನಿಜದ ಬಿಂಬ-
-ವು, ಇಲ್ಲಿ
ನಿನ್ನ ಕಣ್ಣ ಹೊರಳು,
ಮಾತು,
ಹೊರಳ್ಗೊರಳು,
ತುಟಿ ಕೊಂಕು,
ಬಿರಿ ಮುಗುಳು,
ಅಚ್ಚರಿ, ಅರುಳು ಮರುಳುಗಳಲ್ಲಿ -
ಪ್ರತಿಫಲಿಸುವಾಗ....
ಅರಿವಿನ ಹೊಳೆಗೆ ನೆರೆ!
ಎಂದೋ ಗೊತ್ತಿಲ್ಲದೆ
ಬಿನ್ನವಿಸಿದ
ಪ್ರಾರ್ಥನೆಯ ಕರೆಗೆ
ಸಿಕ್ಕ ಮರುದನಿ
ನೀನು,
ಬದುಕಿನ
ಮಿತಿ ಮತ್ತು ಮೀರುವಿಕೆಯ
ತೋರುವ
ಮಾಯಾಕನ್ನಡಿ.
{ಅ}

3 comments:

  1. ಮಗು ಅಂದರೆ ಒಂದು magic!

    ReplyDelete
  2. sooper Sindhu :-)
    magaLendare haage ansatte :-)

    Shubha

    ReplyDelete
  3. ಮಾಯಾಕನ್ನಡಿ ಪ್ರತಿಮೆಗೆ ತಕ್ಕುದಾದ ಮಕ್ಕಳ ಮನಸ್ಸುಗಳು.

    ReplyDelete